ಮುಂಬೈನಲ್ಲಿ ಯಹೂದಿ ಧಾರ್ಮಿಕ ಸ್ಥಳಗಳ ಮೇಲೆ ಕಣ್ಗಾವಲು ನಡೆಸಿದ ಆರೋಪದ ಮೇಲೆ 20 ವರ್ಷದ ಯುವಕನನ್ನು ಬಂಧಿಸಲಾಗಿದೆ. 26/11 ಮುಂಬೈ ದಾಳಿಯ ಮಾದರಿಯ ಸಂಚಿನ ಶಂಕೆ ವ್ಯಕ್ತವಾಗಿದೆ. ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ATS) ಅಂತಾರಾಷ್ಟ್ರೀಯ ಜಾಲದ ಸಂಪರ್ಕ ಪತ್ತೆ ಮಾಡಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಯುವಕರನ್ನು ಬಳಸಿಕೊಳ್ಳುವ ಶಹಜಾದ್ ಭಟ್ಟಿ ನೆಟ್ವರ್ಕ್ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ. ಮುಂಬೈ, ನವೆಂಬರ್ 14: ಮುಂಬೈನಲ್ಲಿ ಯಹೂದಿ ಧಾರ್ಮಿಕ ಸ್ಥಳಗಳು ಸೇರಿದಂತೆ ಹಲವು ಸೂಕ್ಷ್ಮ ಪ್ರದೇಶಗಳ ಮೇಲೆ ರಹಸ್ಯವಾಗಿ ಕಣ್ಗಾವಲು ನಡೆಸಿದ ಆರೋಪದ ಮೇಲೆ 20 ವರ್ಷದ ಯುವಕನನ್ನು ಬಂಧಿಸಲಾಗಿದೆ.