Bigg Boss Kannada 13: ಈ ವಾರ ತಾಂಡವ್ ಮತ್ತು ಗನನ್ ನಡುವೆ ಜಗಳ ನಡೆದಿದೆ. ಬಿಗ್ಬಾಸ್ ಆರಂಭವಾದ ದಿನದಿಂದಲೂ ಗಗನ್ ಮತ್ತು ತಾಂಡವ್ ಅತ್ಯಾಪ್ತ ಸ್ನೇಹಿತರಂತೆ ಇದ್ದರು. ಗಗನ್ ಅಂತೂ ತಾಂಡವ್ ಹೊರಗೆ ಹೋದಾಗ ಬಿಕ್ಕಿ-ಬಿಕ್ಕಿ ಅತ್ತಿದ್ದರು. ಒಬ್ಬರನ್ನು ಬಿಟ್ಟರೆ ಇನ್ನೊಬ್ಬರು ಇಲ್ಲ ಎಂಬಂತೆ ಇದ್ದರು. ಆದರೆ ಈ ವಾರ ಈ ಇಬ್ಬರು ಭೀಕರವಾಗಿ ಜಗಳ ಮಾಡಿದರು. ಪ್ರತಿ ವಾರ ಬಿಗ್ಬಾಸ್ ಮನೆಯಲ್ಲಿ ನಡೆಯುವ ಟಾಸ್ಕ್ಗಳ ವೇಳೆ ಜಗಳು ನಡೆಯುವುದು ತೀರಾ ಸಾಮಾನ್ಯ. ಈ ಸೀಸನ್ನಲ್ಲೂ ಸಹ ಹಲವರ ನಡುವೆ ಪದೇ ಪದೇ ಜಗಳಗಳು ನಡೆಯುತ್ತಲೇ ಇರುತ್ತವೆ. ಆದರೆ ಈ ವಾರ ನಡೆದ ಜಗಳ ಬಹಳ ಗಮನ ಸೆಳೆದಿದೆ.