ಟಾಸ್ಕ್ ಅನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಕಾರಣ ಪದೇ ಪದೇ ಟಾಸ್ಕನ್ನು ರದ್ದು ಮಾಡಲಾಗಿದೆ. ಆದರೆ ಕಳೆದ ಕೆಲ ವಾರಗಳಿಂದ ಟಾಸ್ಕ್ ಅನ್ನು ರದ್ದು ಮಾಡಲಾಗಿರಲಿಲ್ಲ. ಆದರೆ ಈ ವಾರ ಟಾಸ್ಕ್ ರದ್ದಾಯ್ತು. ಮುಖಂಡರ (ಯಶಸ್ ಮತ್ತು ಮಂಜ) ಪೋಸ್ಟರ್ಗಳನ್ನು ನಿಲ್ಲಿಸಿ ಸ್ಪರ್ಧಿಗಳು ಎದುರಾಳಿ ನಾಯಕನ ಪೋಸ್ಟರ್ಗೆ ಕೆಂಪು ಬಣ್ಣ ಬಳಿಯಬೇಕು ಎಂಬುದು ಟಾಸ್ಕ್ ಆಗಿತ್ತು. ಮಂಜ ಮತ್ತು ಯಶಸ್ನ ತಂಡಗಳು ಪರಸ್ಪರ ಎದುರಾಳಿ ಆಗಿದ್ದರು. ಮಂಜ ಮತ್ತು ಯಶಸ್ ಉಸ್ತುವಾರಿ ಆಗಿದ್ದರು.