ಮಧುಮೇಹ ಇರುವವರಿಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾದಾಗ ಚರ್ಮದಲ್ಲಿ ತುರಿಕೆ, ಶುಷ್ಕತೆ ಮತ್ತು ಉರಿ ಕಾಣಿಸಿಕೊಳ್ಳಬಹುದು. ನರಗಳು ಹಾಗೂ ರಕ್ತ ಪರಿಚಲನೆಯ ಮೇಲಿನ ಪರಿಣಾಮದಿಂದಲೂ ಈ ಸಮಸ್ಯೆ ಉಂಟಾಗಬಹುದು. ಕೆಲವೊಮ್ಮೆ ಫಂಗಲ್ ಮತ್ತು ಬ್ಯಾಕ್ಟೀರಿಯಾ ಸೋಂಕಿನ ಅಪಾಯ ಹೆಚ್ಚುತ್ತದೆ. ನಿರಂತರ ತುರಿಕೆ, ಗಾಯ, ಊತ ಅಥವಾ ಕೀವು ಕಂಡುಬಂದರೆ ನಿರ್ಲಕ್ಷಿಸದೆ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ಮಧುಮೇಹ ಅಥವಾ ಡಯಾಬಿಟಿಸ್ ಸಮಸ್ಯೆ ಇದ್ದಾಗ ಅದರ ಪರಿಣಾಮ ಕೇವಲ ದೇಹದ ಒಳಗಿನ ಅಂಗಗಳ ಮೇಲೆ ಮಾತ್ರವಲ್ಲ, ಚರ್ಮದ ಆರೋಗ್ಯದ ಮೇಲೂ ಕಾಣಿಸಿಕೊಳ್ಳಬಹುದು. ರಕ್ತದಲ್ಲಿನ ಸಕ್ಕರೆ ಪ್ರಮಾಣ ದೀರ್ಘಕಾಲ ಹೆಚ್ಚಾಗಿದ್ದರೆ ಕೆಲವರಿಗೆ ಚರ್ಮದಲ್ಲಿ ತುರಿಕೆ, ಶುಷ್ಕತೆ ಮತ್ತು ಉರಿ ಕಾಣಿಸಿಕೊಳ್ಳಬಹುದು.