ದೇಹದ ತೂಕ ಹೆಚ್ಚಾದರೆ ಧ್ವನಿಯಲ್ಲಿಯೂ ಬದಲಾವಣೆ ಉಂಟಾಗುತ್ತದೆಯೇ? ಇಎನ್ಟಿ ತಜ್ಞರ ಪ್ರಕಾರ, ಬೊಜ್ಜು, ಗಂಟಲಿನ ಸುತ್ತ ಕೊಬ್ಬು ಸಂಗ್ರಹವಾಗುವುದು ಮತ್ತು ಆಸಿಡ್ ರಿಫ್ಲಕ್ಸ್ ಸಮಸ್ಯೆಗಳು ಧ್ವನಿಯ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು. ಗೊರಕೆ, ಗಂಟಲು ಒಣಗುವುದು ಮತ್ತು ಬೆಳಗ್ಗೆ ಧ್ವನಿ ಭಾರವಾಗಿರುವುದು ಕೂಡ ಕಾಣಿಸಿಕೊಳ್ಳಬಹುದು. ಧ್ವನಿಯಲ್ಲಿ ನಿರಂತರ ಬದಲಾವಣೆ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ದೇಹದ ತೂಕ ಹೆಚ್ಚಾದರೆ ಬಟ್ಟೆಗಳ ಅಳತೆ ಬದಲಾಗುವುದಷ್ಟೇ ಅಲ್ಲ, ಆರೋಗ್ಯದಲ್ಲಿಯೂ ಹಲವು ಬದಲಾವಣೆಗಳು ಕಾಣಿಸಿಕೊಳ್ಳಬಹುದು. ಆದರೆ ತೂಕ ಹೆಚ್ಚಳದಿಂದ ಧ್ವನಿಯಲ್ಲಿಯೂ ಬದಲಾವಣೆ ಉಂಟಾಗಬಹುದು ಎಂಬುದು ಹಲವರಿಗೆ ತಿಳಿದಿಲ್ಲ.