ಸಾಮಾನ್ಯವಾಗಿ ನೀವು ಚೆಕ್ ಬುಕ್ ಗಮನಿಸಿದರೆ ಮೊತ್ತದ ಬಳಿಕ ಓನ್ಲಿ ಎಂದು ಬರೆಯಲಾಗುತ್ತದೆ. ಹೆಚ್ಚಿನವರು ಇದನ್ನು ಬ್ಯಾಂಕಿನ ಔಪಚಾರಿಕತೆ ಎಂದು ಭಾವಿಸುತ್ತಾರೆ. ಆದರೆ ಈ ರೀತಿ ಬರೆಯುವುದರ ಹಿಂದಿನ ಕಾರಣದ ಬಗ್ಗೆ ಯಾರು ಯೋಚಿಸುವುದಿಲ್ಲ. ಈ ಓನ್ಲಿ ಎಂಬ ಪದ ಬಳಕೆಯ ಮೂಲ ಉದ್ದೇಶವೇ ಹಣಕಾಸಿನ ವಂಚನೆ ಹಾಗೂ ತಿದ್ದುಪಡಿಯನ್ನು ತಡೆಯುವುದಾಗಿದೆ. ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ. ಇತ್ತೀಚೆಗಿನ ದಿನಗಳಲ್ಲಿ ಯುಪಿಐ, ನೆಟ್ ಬ್ಯಾಂಕಿಂಗ್ (net banking) ಮೂಲಕ ವಹಿವಾಟು ನಡೆಸುತ್ತಿದ್ದಾರೆ. ಆದರೆ ಚೆಕ್ನಲ್ಲಿ ಮೊತ್ತ ನಮೂದಿಸಿದ ಬಳಿಕ ಓನ್ಲಿ ಬರೆಯಲಾಗುತ್ತದೆ. ಈ ಪದವನ್ನು ಯಾಕೆ ಬರೆಯಲಾಗುತ್ತದೆ ಎಂದು ಒಮ್ಮೆಯಾದ್ರು ನೀವು ಯೋಚಿಸಿದ್ದೀರಾ?.