ನಗರೀಕರಣ, ಆಧುನೀಕರಣ ಈ ಎಲ್ಲದರ ಕಾರಣದಿಂದಾಗಿ ದಿನದಿಂದ ದಿನಕ್ಕೆ ಮಾಲಿನ್ಯ ಹೆಚ್ಚುತ್ತಿದೆ. ಹೆಚ್ಚುತ್ತಿರು ವಾಯುಮಾಲಿನ್ಯದ ಕಾರಣದಿಂದ ಜನರು ಉಸಿರಾಟ ಸಂಬಂಧಿ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ.ಆಸ್ತಮಾ ಮತ್ತು ಅಲರ್ಜಿಗಳಂತಹ ಸಮಸ್ಯೆಗಳು ವಾಯುಮಾಲಿನ್ಯದಿಂದ ಹೆಚ್ಚಾಗುತ್ತಿವೆ.ಅದರಲ್ಲೂ ನಗರ ಪ್ರದೇಶದಲ್ಲಿ ವಾಯುಮಾಲಿನ್ಯದ ಸಮಸ್ಯೆ ತೀರಾ ಹೆಚ್ಚಿದೆ.ಅಂತಹ ಪರಿಸ್ಥಿತಿಯಲ್ಲಿ ಮನೆಯಲ್ಲಿ ಈ ಕೆಲವೊಂದು ಗಿಡಗಳನ್ನು ನೆಡುವ ಮೂಲಕ ಶುದ್ಧ ಗಾಳಿಯನ್ನು ಪಡೆಯಬಹುದು. ಅಂಗಳದಲ್ಲಿ ಮತ್ತು ಮನೆಯ ಒಳಾಂಗಣದಲ್ಲಿ ನಡೆಸುವಂತಹ ಗಿಡಗಳು (plants) ಮನೆಯ ಅಂದವನ್ನು ಹೆಚ್ಚಿಸುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಅಷ್ಟೇ ಅಲ್ಲದೆ ಮನೆ ಸುತ್ತ ಗಿಡಗಳನ್ನು ನೆಡುವ ಮೂಲಕ ಶುದ್ಧ ಗಾಳಿಯನ್ನು ಸಹ ಪಡೆಯಬಹುದು.