ಪ್ರತಿಯೊಬ್ಬರೂ ಸಂತೋಷವಾಗಿರಲು ಬಯಸುತ್ತಾರೆ. ಆದರೆ ಇಂದಿನ ನಮ್ಮ ಕಾರ್ಯನಿರತ ಜೀವನದಲ್ಲಿ, ಅನೇಕರಿಗೆ ತಮಗಾಗಿ ಸಮಯವನ್ನು ಕಂಡುಕೊಳ್ಳಲು ಅಥವಾ ಸಂತೋಷವಾಗಿರಲು ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ, ಅವರು ತೀರಾ ಒತ್ತಡಕ್ಕೊಳಗಾಗುತ್ತಿದ್ದಾರೆ. ಸಂತೋಷವನ್ನು ಕಂಡುಕೊಳ್ಳುವುದು ಅಷ್ಟೇನೂ ಕಷ್ಟದ ಕೆಲಸವಲ್ಲ. ಕೆಲವೊಂದು ಸರಳ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಹ್ಯಾಪಿಯಾಗಿ ಜೀವನ ನಡೆಸಬಹುದು. ಪ್ರತಿಯೊಬ್ಬರೂ ಸಂತೋಷವನ್ನು (happy) ಬಯಸುತ್ತಾರೆ, ಆದರೆ ದೈನಂದಿನ ಜಂಜಾಟ, ಕೆಲಸದ ಒತ್ತಡಗಳು, ಕುಟುಂಬದ ಜವಾಬ್ದಾರಿಗಳು ಮತ್ತು ಸಣ್ಣ ಪುಟ್ಟ ಸಮಸ್ಯೆಗಳು ಇವೆಲ್ಲದರ ಕಾರಣದಿಂದ ಅನೇಕರಿಗೆ ಸಂತೋಷದಿಂದ ಜೀವನ ನಡೆಸಲು ಸಾಧ್ಯವೇ ಆಗೋದಿಲ್ಲ. ಕೆಲವು ಸಣ್ಣ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ, ನೀವು ಪ್ರತಿದಿನ ನಿಮ್ಮನ್ನು ಸಂತೋಷವಾಗಿರಿಸಿಕೊಳ್ಳಬಹುದು.