ಕೊಪ್ಪ: ಭಾರತೀಯ ಸಂಸ್ಕೃತಿ ಸದೃಢವಾಗಲು ಜಾನಪದ ಕಲಾ ಪ್ರಕಾರವೇ ಮೂಲ ಕಾರಣ. ಜನಪದ ಬೆಳೆಸಲು ಎಲ್ಲರೂ ಶ್ರಮವಹಿಸ ಬೇಕು ಎಂದು ಗೌರಿಗದ್ದೆ ದತ್ತಾವಧೂತ ವಿನಯ್ ಗುರೂಜಿ ಹೇಳಿದರು.ಗೌರಿಗದ್ದೆ ಆಶ್ರಮದಲ್. ಪುಸ್ತಕದಲ್ಲಿ ಶೇಖರಣೆಗೊಂಡ ಅನುಭವದ ವಿಚಾರ, ಜಾನಪದದಲ್ಲಿ ಜ್ಞಾನ, ತತ್ವ, ಧರ್ಮ, ಸಾಮಾಜಿಕ ಕಳಕಳಿಯ ಸಂದೇಶ ಅಡಕವಾಗಿದೆ ಎಂದರು.ಜನಪದ ಉಳಿಸುವ ನಿಟ್ಟಿನಲ್ಲಿ ಆಶ್ರಮ ಮುಂದಿನ ದಿನದಲ್ಲಿ ಕಲಾನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. ಬುಟ್ಟಿ, ಮಡಕೆ ಇತರೆ ಸಾಂಪ್ರದಾಯಿಕ ವಸ್ತುಗಳ ತಯಾರಿಕೆ ಗುಡಿ ಕೈಗಾರಿಕೆಗಳು ಕೂಡ ಜಾನಪದ ವ್ಯಾಪ್ತಿಗೆ ಬರುವುದರಿಂದ ಇದನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರಗಳು ಯೋಜನೆಗಳನ್ನು ರೂಪಿಸಬೇಕು ಎಂದರು.ಜಿಲ್ಲಾಧ್ಯಕ್ಷ ಬಿ.ಜಿ.ಸುರೇಶ್ ಮಾತನಾಡಿ, ಜಾನಪದ ಎಂದರೆ ಜನಸಮಾನ್ಯರ ಜೀವನದ ಅನುಭವದಿಂದ ಅರಳಿದ ಹೂವು.