ಕಾನ್ಪುರ: ದೇಶದ ಹಲವು ಸ್ಥಳಗಳಲ್ಲಿ ಅದರಲ್ಲೂ ಶಾಲಾ-ಕಾಲೇಜು, ಬಾಲಿವುಡ್ ನಟರು, ಸಂಗೀತಗಾರರ ಕಾರ್ಯಕ್ರಮಗಳಲ್ಲಿ ಬಾಂಬ್ ಸ್ಪೋಟಿಸುವ ಕುರಿತು ಬೆದರಿಕೆ ಇ-ಮೇಲ್ಗಳು ನಿರಂತರವಾಗಿ ಬರುತ್ತಿದ್ದವ. ಈ ಬೆದರಿಕೆ ಇ-ಮೇಲ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇದರ ಜಾಡು ಹಿಡಿದು ಹೊರಟ ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳಕ್ಕೆ ಕಾನ್ಪುರದಲ್ಲಿ ಸೈಬರ್ ಕಿಲಾಡಿವೊಬ್ಬ ಸಿಕ್ಕಿಬಿದ್ದಿದ್ದಾನೆ. ಲ್ಯಾಪ್ಟಾಪ್ ತೆರೆದ ಎಟಿಎಸ್ಗೆ ಕಾದಿತ್ತು ಶಾಕ್!ಅಕ್ಟೋಬರ್ 28 ರಂದು ಖಚಿತ ಮಾಹಿತಿ ಮೇರೆಗೆ ಎಟಿಎಸ್ ತಂಡ ಬಂಧಿತ ಆರೋಪಿ ಅಂಕಿತ್ ಶಂಖ್ವಾರ್ ಮನೆಗೆ ನುಗ್ಗಿತ್ತು. ಆತನ ಬಳಿಯಿದ್ದ ಲ್ಯಾಪ್ಟಾಪ್ ಮತ್ತು ಮೊಬೈಲ್ ವಶಪಡಿಸಿಕೊಂಡು ಪರಿಶೀಲಿಸಿದ ಅಧಿಕಾರಿಗಳಿಗೆ ಅಕ್ಷರಶಃ ಶಾಕ್ ಆಗಿದೆ.