Sharmila Tagore Childhood Photo: ಮಕ್ಕಳ ದಿನಾಚರಣೆ ಅಂಗವಾಗಿ ನಟಿ ಸೋಹಾ ಅಲಿ ಖಾನ್ ತಮ್ಮ ಕುಟುಂಬದ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ತಾಯಿ ಶರ್ಮಿಳಾ ಟ್ಯಾಗೋರ್ ಮತ್ತು ತಂದೆ, ಖ್ಯ. ತಾಯಿ ಶರ್ಮಿಳಾ ಟ್ಯಾಗೋರ್ ಮತ್ತು ತಂದೆ, ಖ್ಯಾತ ಕ್ರಿಕೆಟಿಗ ಮನ್ಸೂರ್ ಅಲಿ ಖಾನ್ ಪಟೌಡಿ ಅವರು ಬಾಲ್ಯದಲ್ಲಿದ್ದಾಗ ಜವಾಹರಲಾಲ್ ನೆಹರು ಅವರೊಂದಿಗೆ ತೆಗೆಸಿಕೊಂಡಿದ್ದ ಅಪರೂಪದ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.ಪ್ರತಿ ವರ್ಷ ನವೆಂಬರ್ 14ರಂದು ಜವಾಹರಲಾಲ್ ನೆಹರು ಅವರ ಜನ್ಮದಿನದ ಅಂಗವಾಗಿ ದೇಶಾದ್ಯಂತ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಸೋಹಾ ಹಂಚಿಕೊಂಡಿರುವ ಹಳೆಯ ಕಪ್ಪು-ಬಿಳುಪು ಫೋಟೋಗಳು ಗಮನ ಸೆಳೆದಿವೆ.