Kajal Agarwal: ಶಂಕರ್ ನಿರ್ದೇಶನದ ಹಾಗೂ ಕಮಲ್ ಹಾಸನ್ ಮುಖ್ಯಭೂಮಿಕೆಯಲ್ಲಿ ನಟಿಸಿದ 'ಇಂಡಿಯನ್ 2' ಚಿತ್ರದ ಚಿತ್ರೀಕರಣದ ವೇಳೆ ನಡೆದ ಭೀಕರ ಅಪಘಾತವನ್ನು ನೆನೆದ ತೆಲುಗು ನಟಿ ಕಾಜಲ್ ಅಗರ್ವಾಲ್. 2020ರಲ್ಲಿ ಇಡೀ ಚಿತ್ರೋದ್ಯಮವನ್ನೇ ಬೆಚ್ಚಿಬೀಳಿಸಿದ್ದ ಈ ಘಟನೆ ನಡೆದು ಆರು ವರ್ಷಗಳೇ ಕಳೆದಿದ್ದರೂ, ಆ ದಿನದ ಕಹಿ ನೆನಪುಗಳು ಇನ್ನೂ ತಮ್ನನ್ನು ಕಾಡುತ್ತಿವೆ ಎಂದು ನಟಿ ಹೇಳಿಕೊಂಡಿದ್ದಾರೆ.'ಇಂಡಿಯನ್ 2' ಚಿತ್ರೀಕರಣ...2020ರ ಫೆಬ್ರವರಿಯಲ್ಲಿ, ಚೆನ್ನೈನ ಇವಿಪಿ ಫಿಲ್ಮ್ ಸಿಟಿಯಲ್ಲಿ 'ಇಂಡಿಯನ್ 2' ಚಿತ್ರದ ಬೃಹತ್ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯುತ್ತಿತ್ತು.