ಎನ್.ಆರ್.ಪುರ: ಸರ್ಕಾರ ಅಡುಗೆ ಸಹಾಯಕರಿಗೆ ಸರಿಯಾಗಿ ಸಂಬಳ ನೀಡದೆ, ಅತ್ಯಂತ ಕೀಳಾಗಿ ಕಾಣುತ್ತಿದೆ ಎಂದು ಹಿರಿಯ ಅಡುಗೆ ತಯಾರಕಿ ಅನ್ನಪೂರ್ಣ ಆರೋಪಿಸಿದರು.ಅಡುಗೆ ತಯಾರಕ ಮಹಿಳೆಯರನ್ನು ಕೆಲಸದಿಂದ ಬ. ಕಳೆದ ಎರಡು ತಿಂಗಳ ಗೌರವ ಧನದಲ್ಲಿ 1 ಸಾವಿರ ಕಡಿಮೆ ಹಾಕಿದ್ದಾರೆ. 25 ವರ್ಷಗಳಿಂದ ರಾಜ್ಯದಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯಡಿ ಅಡುಗೆಯವರಾಗಿ ಕೆಲಸ ನಿರ್ವಹಿಸುತ್ತಿರುವ ಬಿಸಿಯೂಟ ತಯಾರಕರನ್ನು ಕೆಲಸದಿಂದ ಬಿಡಿಸಿ ಎನ್ಜಿಒ ಖಾಸಗಿ ಸಂಸ್ಥೆಗಳಿಗೆ ನೀಡಿ ಬಿಸಿಯೂಟ ಯೋಜನೆ ನಿರ್ವಹಿಸುವ ಹುನ್ನಾರ ನಡೆಸಿದೆ ಎಂದು ದೂರಿದರು.ಶಿಕ್ಷಕರ ಕೆಲಸ ಕಡಿಮೆ ಕ್ಲಸ್ಟರ್ ಮಟ್ಟದ ಅಡುಗೆ ಕೇಂದ್ರ ನಿರ್ಮಿಸಿ ಉಳಿದ ಶಾಲೆಗಳಿಗೆ ವಿತರಿಸಲು ಮುಂದಾಗಿರುವುದು ಖಂಡನೀಯ.