ಟಾಲಿವುಡ್ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಅವರು ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ಅವರ ಮೊದಲ ಆಡಿಷನ್ ಘಟನೆಯನ್ನು ಹಂಚಿಕೊಂಡಿದ್ದಾರೆ. ಮುಂಬೈನಲ್ಲಿ ನಡೆದ ಆಡಿಷನ್ ವೇಳೆ ಹೆಚ್ಚಿನ ಫೋಟೋ ಕೇಳಿದಾಗ, ನಾಚಿಕೆಯಿಂದ ಪರ್ಸ್ನಲ್ಲಿದ್ದ ಪಾಸ್ಪೋರ್ಟ್ ಸೈಜ್ ಫೋಟೋ ತೆಗೆದುಕೊಟ್ಟಿದ್ದ ಕನ್ನಡದ ನಟಿಯ ಮುಗ್ಧತೆಯನ್ನು ಅವರು ಸ್ಮರಿಸಿದ್ದಾರೆ. ಟಾಲಿವುಡ್ನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ತಮ್ಮ ಮಾಸ್ ಆಕ್ಷನ್ ಸಿನಿಮಾಗಳ ಮೂಲಕ ತೆಲುಗು ಚಿತ್ರರಂಗದಲ್ಲಿ ವಿಶೇಷ ಛಾಪು ಮೂಡಿಸಿದ್ದಾರೆ. ಸ್ಟಾರ್ ನಟರಿಗೆ ಬ್ಲಾಕ್ಬಸ್ಟರ್ ಹಿಟ್ಗಳನ್ನು ನೀಡಿರುವ ಇವರು, ಬೆಳ್ಳಿತೆರೆಗೆ ಹಲವು ಪ್ರತಿಭಾವಂತ ನಾಯಕಿಯರನ್ನೂ ಪರಿಚಯಿಸಿದ್ದಾರೆ. ಈ ಪೈಕಿ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ಕೂಡ ಒಬ್ಬರು.