ಕರ್ನಾಟಕ ಸರ್ಕಾರದ ಸಾಲದ ಹೊರೆ ಹೊರಲು ಇಷ್ಟವಿಲ್ಲ ಎಂದು ಬಾಗಲಕೋಟೆಯ ನಿವೃತ್ತ ಅಧಿಕಾರಿ ವಿಜಯರಾವ್ ಕುಲಕರ್ಣಿ ತಮ್ಮ ಪಾಲಿನ ಸಾಲ ತೀರಿಸಲು 50 ಸಾವಿರ ರೂಪಾಯಿ ಚೆಕ್ ಕಳುಹಿಸಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸ್ಪೀಡ್ ಪೋಸ್ಟ್ ಮೂಲಕ ಚೆಕ್ ರವಾನಿಸಿದ್ದಾರೆ. ಏಪ್ರಿಲ್ನಲ್ಲೇ ಪತ್ರ ಬರೆದಿದ್ದರೂ ಉತ್ತರ ಬಾರದ ಹಿನ್ನೆಲೆಯಲ್ಲಿ ಇದೀಗ ಚೆಕ್ ಕಳುಹಿಸಿರುವ ಅವರ ನಡೆ ಗಮನ ಸೆಳೆದಿದೆ.