ವೇಗ ಮತ್ತು ಬೌನ್ಸ್ಗೆ ಹೆಸರಾದ ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ (SENA) ಪಿಚ್ಗಳಲ್ಲಿ ಕ್ರಿಕೆಟ್ ನೋಡುವುದೇ ಒಂದು ವಿಶೇಷ ಅನುಭವ. ಇದೀಗ ಕ್ರಿಕೆಟ್ ಪ್ರೇಮಿಗಳಿಗೆ ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಿದ್ದು, 2027ರ ಏಕದಿನ ವಿಶ್ವಕಪ್ ಬೆನ್ನಲ್ಲೇ 2028, 2030 ಮತ್ತು 2032ರ ಟಿ20 ವಿಶ್ವಕಪ್ಗಳೂ ಸಹ ಇದೇ SENA ದೇಶಗಳಲ್ಲಿ ನಡೆಯುವ ನಿರೀಕ್ಷೆಯಿದೆ. ಕ್ರಿಕೆಟ್ ಪ್ರೇಮಿಗಳಿಗೆ ಮುಂಬರುವ ವರ್ಷಗಳಲ್ಲಿ ಭರ್ಜರಿ ಮನರಂಜನೆ ಕಾದಿದೆ. ಏಕೆಂದರೆ 2027ರ ಏಕದಿನ ವಿಶ್ವಕಪ್ ಬೆನ್ನಲ್ಲೇ ಟಿ20 ವಿಶ್ವಕಪ್ಗಳ ಸರಣಿಯೂ ಶುರುವಾಗಲಿದೆ. ಅಂದರೆ, 2027ರ ಅಂತ್ಯದಲ್ಲಿ ಏಕದಿನ ವಿಶ್ವಕಪ್ ನಡೆದರೆ, 2028, 2030 ಮತ್ತು 2032ರಲ್ಲಿ ಟಿ20 ವಿಶ್ವಕಪ್ಗಳು ಜರುಗಲಿವೆ.