ಸ್ಟಾರ್ ಸುವರ್ಣದ ‘ಆಸೆ’ ಧಾರಾವಾಹಿಯಲ್ಲಿ ಸೂರ್ಯ ಪಾತ್ರದಲ್ಲಿ ನಟಿಸುತ್ತಿರುವ ನಿನಾದ್ ಹರಿತ್ಸ ಅವರು ಸದ್ಯ ಪರದೆಯಿಂದ ದೂರ ಉಳಿದಿದ್ದಾರೆ. ಸಾಲ ತೀರಿಸಲು ದುಬೈಗೆ ತೆರಳಿರುವ ಕಥೆಯ ಹಿನ್ನೆಲೆಯಲ್ಲಿ ಪಾತ್ರಕ್ಕೆ ಬ್ರೇಕ್ ಸಿಕ್ಕಿದ್ದು, ಮಹತ್ತರ ಕೆಲಸಕ್ಕಾಗಿ ತಾವೂ ಕೂಡ ಒಂದು ಸಣ್ಣ ಬಿಡುವು ಪಡೆದಿರುವುದಾಗಿ ನಟ ಸ್ಪಷ್ಟಪಡಿಸಿದ್ದಾರೆ. ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ ‘ಆಸೆ’ ಧಾರಾವಾಹಿ ಪ್ರೇಕ್ಷಕರ ಮನಗೆದ್ದಿದೆ. ಈ ಸೀರಿಯಲ್ನ ಕಥಾ ನಾಯಕ ನಿನಾದ್ ಹರಿತ್ಸ, ಪ್ರಿಯಾಂಕಾ, ಮಂಡ್ಯ ರಮೇಶ್ ಸೇರಿದಂತೆ ಎಲ್ಲಾ ಕಲಾವಿದರ ನಟನೆ ಮೆಚ್ಚುಗೆ ಪಡೆದಿದೆ. ಈ ಧಾರಾವಾಹಿಯಲ್ಲಿ ಸೂರ್ಯ ಪಾತ್ರ ಮಾಡಿರೋ ನಿನಾದ್ ಅವರು ಕಳೆದ ಕೆಲ ಸಮಯದಿಂದ ಪರದೆಯ ಮೇಲೆ ಕಾಣಿಸುತ್ತಿಲ್ಲ.