ಸೋನಿಯಾ ಗಾಂಧಿ ತಮ್ಮ ಆತ್ಮಕಥನದಲ್ಲಿ ಗೋಧ್ರಾ ರೈಲು ದಹನ ಪ್ರಕರಣದ ಕಾರಣ ವಿವಾದಿತವಾಗಿದೆ ಎಂದು ಉಲ್ಲೇಖಿಸಿರುವುದಕ್ಕೆ ಮಾಜಿ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಧಿವಿಜ್ಞಾನ ಸಾಕ್ಷ್ಯಗಳು ಮತ್ತು ನ್ಯಾಯಾಲಯದ ತೀರ್ಪು ಪ್ರಕರಣದ ಸತ್ಯವನ್ನು ಸಾಬೀತುಪಡಿಸಿವೆ ಎಂದು ಅವರು ಹೇಳಿದ್ದಾರೆ. ಸೋನಿಯಾ ಹೇಳಿಕೆ ಹಾಗೂ ಅಸ್ತಾನಾ ಪ್ರತಿಕ್ರಿಯೆ ಇದೀಗ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ನವದೆಹಲಿ, ನವೆಂಬರ್ 14: 2002ರ ಗುಜರಾತ್ ಗೋಧ್ರಾ ರೈಲು ದಹನ ಪ್ರಕರಣ ಮತ್ತೆ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.