RSS Must Follow Due Process for Vijayadashami Marches Says Priyank Kharge, News News, Times Now Kannada. ಬೆಂಗಳೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ (Home Minister Priyanka Kharge) ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ವಿರುದ್ಧ ಅಧಿಕಾರ ವಹಿಸಿಕೊಂಡ ಆರಂಭದ ದಿನಗಳಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ಪ್ರಶ್ನೆ ಮಾಡುತ್ತಲೇ ಇದ್ದಾರೆ. ಇದರ ಮುಂದುವರೆದ ಭಾಗವಾಗಿ ಈಗ ಮತ್ತೊಂದು ನಿಯಮವನ್ನು ಆರ್ಎಸ್ಎಸ್ಗೆ ನೀಡಿದ್ದಾರೆ. ವಿಜಯದಶಮಿ (Vijayadashami) ಮಾರ್ಗ ಮೆರವಣಿಗೆಗಳಿಗೆ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಸಲ್ಲಿಸುವ ಮೂಲಕ ಮತ್ತು ಅಗತ್ಯವಿರುವ ಎಲ್ಲಾ ವಿವರಗಳನ್ನು ಒದಗಿಸುವ ಮೂಲಕ ಔಪಚಾರಿಕ ಅನುಮತಿಯನ್ನು ಪಡೆಯಬೇಕು ಎಂದು ಎಕ್ಸ್ ಮೂಲಕ ಮಾಹಿತಿ ನೀಡಿದ್ದಾರೆ.