ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ರಕ್ತದೋಕುಳಿ ಹರಿದಿದೆ, ಪತ್ನಿಯ ಕಣ್ಣೆದುರೇ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ. ಕಣ್ಣೆದುರೇ ನಡೆದ ಈ ರಕ್ತಸಿಕ್ತ ದಾಳಿಯನ್ನು ಕಂಡು ಪತ್ನಿ ದಿಗ್ಭ್ರಮೆಗೊಂಡಿದ್ದು, ಕೃತ್ಯ ಎಸಗಿದ ಇಬ್ಬರು ಹಂತಕರು ಬೈಕ್ನಲ್ಲಿ ಪರಾರಿಯಾಗಿದ್ದಾರೆ.ಮೂಲತಃ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನವರಾದ 39 ವರ್ಷದ ಚರಣ್ ಗೌಡ ಹತ್ಯೆಯಾದ ದುರ್ದೈವಿ. ಯಲಹಂಕದ ಕೋಗಿಲು ಸಮೀಪ ಕುಟುಂಬದೊಂದಿಗೆ ವಾಸವಾಗಿದ್ದ ಇವರು, ಕಳೆದ 10 ವರ್ಷಗಳಿಂದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. 'ಧನಿ ಪ್ರಾಪರ್ಟೀಸ್' (Dhani Properties) ಹೆಸರಿನಲ್ಲಿ ಉದ್ಯಮ ನಡೆಸುತ್ತಿದ್ದರು.ಕಚೇರಿ ಮುಂದೆಯೇ ಹೊಂಚು ಹಾಕಿ ಅಟ್ಟಹಾಸ ಮೆರೆದ ಹಂತಕರು!