ಹೈದರಾಬಾದ್: ಕ್ರಿಕೆಟ್ನಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ಅಪಾರ ಕನಸು ಕಂಡಿದ್ದ 17 ವರ್ಷದ ಯುವ ಆಟಗಾರ್ತಿಯೊಬ್ಬಳು ಆತ್ಮಹತ್ಯೆಗೆ ಶರಣಾಗುವ ಮೂಲಕ ದುರಂತವಾಗಿ ಸಾವಿಗೀಡಾಗಿದ್ದಾಳೆ. ತೆಲಂಗಾಣ. ತೆಲಂಗಾಣದ ವಿಕಾರಾಬಾದ್ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಯುವತಿಯನ್ನು ನಂದಿನಿ ಎಂದು ಗುರುತಿಸಲಾಗಿದ್ದು, ಇಬ್ಬರು ಯುವಕರ ಕಿರುಕುಳದಿಂದಾಗಿ ಆಕೆ ಇಂತಹ ನಿರ್ಧಾರ ಕೈಗೊಂಡಿರಬಹುದು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪ್ರತಿಭಾನ್ವಿತ ಆಟಗಾರ್ತಿವಿಕಾರಾಬಾದ್ನ ಅಜ್ಜಿ ಮನೆಯಲ್ಲಿ ಶುಕ್ರವಾರ ಯುವತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಆಕೆ ಕ್ರಿಕೆಟ್ ಕೋಚಿಂಗ್ ಪಡೆಯುತ್ತಿದ್ದು, 2023-24ನೇ ಸಾಲಿನ ಬಿಸಿಸಿಐ ಅಂಡರ್-15 ಏಕದಿನ ಟ್ರೋಫಿಯಲ್ಲೂ ಪ್ರತಿನಿಧಿಸಿದ್ದಳು. ಸ್ಥಳೀಯ ಕ್ರಿಕೆಟ್ ಪಂದ್ಯಗಳಲ್ಲಿಯೂ ಆಡುತ್ತಿದ್ದ ಯುವ ಪ್ರತಿಭೆ, ಅಂಡರ್-19 ಟೂರ್ನಿಗೂ ಆಯ್ಕೆ ಆಗಿದ್ದಳು.