ಜೈನಮುನಿ ಗುಣದರನಂದಿ ಮಹಾರಾಜ್ ಜೈನ ಅಭಿವೃದ್ಧಿ ನಿಗಮ, ಶಾಲೆಗಳಲ್ಲಿ ಮುನಿಗಳ ವಾಸ್ತವ್ಯಕ್ಕೆ ಅನುಮತಿ ಸೇರಿದಂತೆ ತಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದ ಕಾರಣ ಸಲ್ಲೇಖನ ವ್ರತದ ಮೂಲಕ ದೇಹತ್ಯಾಗ ಹೋರಾಟಕ್ಕೆ ಮುಂದಾಗಿದ್ದಾರೆ. ನವೆಂಬರ್ 19 ರಿಂದ ಹೋರಾಟ ಆರಂಭವಾಗಲಿದ್ದು, ಬೇಡಿಕೆ ಈಡೇರದಿದ್ದರೆ ಡಿಸೆಂಬರ್ 4 ರಿಂದ ಸುವರ್ಣಸೌಧದ ಎದುರು ಪಾದಯಾತ್ರೆ ಹಾಗೂ ನಿರಶನ ನಡೆಸುವುದಾಗಿ ಎಚ್ಚರಿಸಿದ್ದಾರೆ. ಹುಬ್ಬಳ್ಳಿ, ನವೆಂಬರ್ 13: ಜೈನ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಜೈನ ಮುನಿ ಗುಣದರನಂದಿ ಮಹರಾಜ್ ಆಗ್ರಹಿಸಿದ್ದರು.