ಕಲ್ಲಂಗಡಿ ಹಣ್ಣಿನ ಬೀಜಗಳನ್ನು ಸಾಮಾನ್ಯವಾಗಿ ಎಸೆಯುತ್ತೀರಾ? ಆದರೆ ಅವುಗಳ ಒಳಭಾಗದಲ್ಲಿ ಪ್ರೋಟೀನ್ ಮತ್ತು ಶಕ್ತಿಯನ್ನು ನೀಡುವ ಪೋಷಕಾಂಶಗಳಿವೆ. 100 ಗ್ರಾಂ ಕಲ್ಲಂಗಡಿ ಬೀಜದ ಒಳಭಾಗದಲ್ಲಿ ಸುಮಾರು 34 ಗ್ರಾಂ ಪ್ರೋಟೀನ್ ಇರಬಹುದು. ಜಿಮ್ ಮಾಡುವವರು, ಕ್ರೀಡಾಪಟುಗಳು ಮತ್ತು ಸಸ್ಯಾಹಾರದಿಂದ ಪ್ರೋಟೀನ್ ಪಡೆಯಲು ಬಯಸುವವರಿಗೆ ಇದು ಉತ್ತಮ ಆಹಾರ ಆಯ್ಕೆಯಾಗಬಹುದು. ದೇಹಕ್ಕೆ ಅಗತ್ಯವಾದ ಪ್ರೋಟೀನ್ ಪಡೆಯಲು ಹೆಚ್ಚಿನವರು ಮೊಟ್ಟೆ, ಹಾಲು, ಮಾಂಸ ಮತ್ತು ಬೇಳೆಕಾಳುಗಳನ್ನು ಸೇವಿಸುತ್ತಾರೆ. ಆದರೆ ಕಡಿಮೆ ಬೆಲೆಗೆ ಉತ್ತಮ ಪ್ರಮಾಣದ ಪ್ರೋಟೀನ್ ಮತ್ತು ಶಕ್ತಿಯನ್ನು ನೀಡುವ ಮತ್ತೊಂದು ಆಹಾರವಿದೆ. ಅದರಲ್ಲಿಯೂ ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣು ತಿಂದ ನಂತರ ಅದರ ಬೀಜಗಳನ್ನು ಎಸೆಯುತ್ತೇವೆ.