ವಿಶ್ವದಾದ್ಯಂತ ಸುಮಾರು 74 ದೇಶಗಳಲ್ಲಿ ಮೈಕ್ರೋಸಾಫ್ಟ್ 365 ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದು, ಲಕ್ಷಾಂತರ ಬಳಕೆದಾರರು ಇಮೇಲ್ ಮತ್ತು ಆಫೀಸ್ ಅಪ್ಲಿಕೇಶನ್ಗಳನ್ನು ಬಳಸಲು ಪರದಾಡುವಂತಾಗಿದೆ. 22 ಗಂಟೆಗಳಾದರೂ ಸಮಸ್ಯೆ ಪೂರ್ಣ ಸರಿಹೋಗಿಲ್ಲ. ಮೈಕ್ರೋಸಾಫ್ಟ್ 365 ಸ್ಯೂಟ್ ಅನ್ನು ಅಳವಡಿಸಿಕೊಂಡಿರುವ ಸಿಸ್ಟಂಗಳಿಗೆ ವಿವಿಧ ಸೇವೆಗಳಲ್ಲಿ ವ್ಯತ್ಯಯ ಆಗಿದೆ. ಬಹಳ ಜನರಿಗೆ ಹೆಚ್ಚಾಗಿ ಔಟ್ಲುಕ್ ಇಮೇಲ್ ಸಮಸ್ಯೆಯಾಗಿದೆ. ನವದೆಹಲಿ, ನವೆಂಬರ್ 13: ವಿಶ್ವಾದ್ಯಂತ ಮೈಕ್ರೋಸಾಫ್ಟ್ 365 ಸೇವೆಗಳಲ್ಲಿ ಹಠಾತ್ ತಾಂತ್ರಿಕ ದೋಷ ಉಂಟಾಗಿದ್ದು, ಭಾರತ ಸೇರಿದಂತೆ 74ಕ್ಕೂ ಹೆಚ್ಚು ದೇಶಗಳಲ್ಲಿ ಬಳಕೆದಾರರು ಬಾಧಿತರಾಗಿದ್ದಾರೆ.