ದಾವಣಗೆರೆಯಲ್ಲಿ ಮೂವರು ಅನಾಥ ಯುವತಿಯರಿಗೆ ಜಿಲ್ಲಾಡಳಿತ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹೆತ್ತವರಾಗಿ ವಿವಾಹ ನೆರವೇರಿಸಿದ್ದಾರೆ. ಸರ್ಕಾರಿ ರಾಜ್ಯ ಮಹಿಳಾ ವಸತಿ ನಿಲಯದಲ್ಲಿ ನಡೆದ ಈ ಸಂಭ್ರಮದ ಮದುವೆ, ಅಂತರ್ಧರ್ಮೀಯ ವಿವಾಹದ ಮೂಲಕ ಕೋಮು ಸೌಹಾರ್ದತೆಯ ಸಂದೇಶ ಸಾರಿತು. ಅಧಿಕಾರಿಗಳ ಮಾನವೀಯ ಕಾರ್ಯದಿಂದ ಯುವತಿಯರಿಗೆ ಹೊಸ ಬಾಳು ಸಿಕ್ಕಿದೆ. ದಾವಣಗೆರೆ, ನ.13: ತಂದೆ-ತಾಯಿಯ ಪ್ರೀತಿಯಿಂದ ವಂಚಿತರಾಗಿದ್ದ ಮೂವರು ಅನಾಥ ಯುವತಿಯರ ಬಾಳಿನಲ್ಲಿ ಇಂದು ಹೊಸ ಬೆಳಕು ಮೂಡಿದೆ. ದಾವಣಗೆರೆ ಜಿಲ್ಲಾಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳೇ ಹೆತ್ತವರ ಸ್ಥಾನದಲ್ಲಿ ನಿಂತು, ಸಂಪ್ರದಾಯಬದ್ಧವಾಗಿ ಮೂವರು ಯುವತಿಯರಿಗೆ ಕಂಕಣಭಾಗ್ಯ ಕರುಣಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.