ಈರುಳ್ಳಿಯ ಮೇಲೆ ಕಪ್ಪು ಕಲೆಗಳು ಕಾಣಿಸಿಕೊಂಡಿವೆಯೇ? ಹಾಗಾದರೆ ಅಡುಗೆಗೆ ಬಳಸುವ ಮೊದಲು ಎಚ್ಚರ ವಹಿಸಿ. ಈ ಕಲೆಗಳು ಆಸ್ಪರ್ಜಿಲಸ್ ನೈಗರ್ ಎಂಬ ಶಿಲೀಂಧ್ರದಿಂದ ಉಂಟಾಗಿರಬಹುದು. ಇದು ಕೆಲವರಲ್ಲಿ ಅಲರ್ಜಿ ಮತ್ತು ಉಸಿರಾಟದ ಸಮಸ್ಯೆಗಳನ್ನು ಹೆಚ್ಚಿಸಬಹುದು. ಒಳಗಿನ ಪದರಗಳಲ್ಲಿಯೂ ಕಲೆಗಳಿದ್ದರೆ ಅಂತಹ ಈರುಳ್ಳಿಯನ್ನು ಸೇವಿಸಬಾರದು. ಈರುಳ್ಳಿಯನ್ನು ಸರಿಯಾಗಿ ಸಂಗ್ರಹಿಸುವ ವಿಧಾನ ತಿಳಿದುಕೊಳ್ಳುವುದು ಕೂಡ ಮುಖ್ಯ. ಈರುಳ್ಳಿ ಅಡುಗೆಮನೆಯ ಪ್ರಮುಖ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ. ತರಕಾರಿ, ಸಾಂಬಾರ್, ಪಲ್ಯ, ಸಲಾಡ್ ಸೇರಿದಂತೆ ಅನೇಕ ಖಾದ್ಯಗಳಲ್ಲಿ ಇದನ್ನು ಬಳಸಲಾಗುತ್ತದೆ. ಆದರೆ ಕೆಲವೊಮ್ಮೆ ಈರುಳ್ಳಿಯ ಮೇಲ್ಭಾಗದಲ್ಲಿ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ. ಇವುಗಳನ್ನು ಸಾಮಾನ್ಯ ಕಲೆಗಳೆಂದು ನಿರ್ಲಕ್ಷಿಸಿ ಅಡುಗೆಗೆ ಬಳಸುವುದು ಸರಿಯಲ್ಲ.