ಪ್ರಧಾನಿ ಮೋದಿ ಉದ್ಘಾಟಿಸಿದ ನಮ್ಮ ಮೆಟ್ರೋ ಪಿಂಕ್ ಲೈನ್ನಲ್ಲಿ ನವೆಂಬರ್ 14ರಿಂದ ವಾಣಿಜ್ಯ ಸಂಚಾರ ಆರಂಭವಾಗಲಿದೆ. ಕಾಳೇನ ಅಗ್ರಹಾರದಿಂದ ಎಸ್.ಜಿ. ಪಾಳ್ಯದವರೆಗಿನ ಈ ಹೊಸ ಮಾರ್ಗ ರಾಜಧಾನಿಯ ಸಂಚಾರ ದಟ್ಟಣೆ ಕಡಿಮೆ ಮಾಡಲು ಸಹಕಾರಿಯಾಗಲಿದೆ. ಬಿಎಂಆರ್ಸಿಎಲ್ ಅಧಿಕೃತ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ವಾರದ ದಿನಗಳು ಹಾಗೂ ವಾರಾಂತ್ಯಕ್ಕೆ ಅನುಗುಣವಾಗಿ ರೈಲುಗಳ ಸಮಯ ಮತ್ತು ಆವರ್ತನ ಲಭ್ಯವಿದೆ. ಸಾರ್ವಜನಿಕರು ಈ ಸೇವೆಯನ್ನು ಬಳಸಬಹುದು. ಬೆಂಗಳೂರು, ನ.13: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ನವೆಂಬರ್ 13) ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದ ಬಹುನಿರೀಕ್ಷಿತ ನಮ್ಮ ಮೆಟ್ರೋ 'ಪಿಂಕ್ ಲೈನ್' ಮಾರ್ಗದಲ್ಲಿ ನಾಳೆಯಿಂದಲೇ (ನವೆಂಬರ್ 14) ಸಾರ್ವಜನಿಕರ ವಾಣಿಜ್ಯ ಸಂಚಾರ ಆರಂಭವಾಗಲಿದೆ.