ಕಾಸ್ಮೋಸ್ ಮೈಸೂರು ತಾರಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾನವೀಯತೆ ಮೆರೆದಿದ್ದಾರೆ. ಅಸ್ವಸ್ಥಗೊಂಡಿದ್ದ 70 ವರ್ಷದ ಬಿಜೆಪಿ ಕಾರ್ಯಕರ್ತೆ ಪ್ರೇಮಾ ಕೆ ಅವರ ಆರೋಗ್ಯವನ್ನು ಸ್ವತಃ ವಿಚಾರಿಸಿದ ಮೋದಿ, ಚಿಕಿತ್ಸೆಗೆ ಸೂಚನೆ ನೀಡಿದರು. ಅವರ ಈ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಮೈಸೂರು, ನವೆಂಬರ್ 13: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾನವೀಯ ನಡೆ ಮೂಲಕ ಗಮನ ಸೆಳೆದಿದ್ದಾರೆ. ಕಾಸ್ಮೋಸ್ ಮೈಸೂರು ತಾರಾಲಯ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ನಂಜನಗೂಡಿನ 70 ವರ್ಷದ ಬಿಜೆಪಿ ಕಾರ್ಯಕರ್ತೆ ಪ್ರೇಮಾ.ಕೆ ಅವರು ಏಕಾಏಕಿ ಅಸ್ವಸ್ಥಗೊಂಡು ಕುಸಿದು ಬೀಳುವ ಸ್ಥಿತಿಯಲ್ಲಿದ್ದರು.