ಈ ವಾರ (ನವೆಂಬರ್ 15-21) ಗ್ರಹಗಳ ಸಂಚಾರವು ನಿಮ್ಮ ಉದ್ಯೋಗ ಭವಿಷ್ಯದ ಮೇಲೆ ಮಹತ್ವದ ಪರಿಣಾಮ ಬೀರಲಿದೆ. ಬುಧ, ಶುಕ್ರ, ಸೂರ್ಯ, ಗುರುಗಳು ವೃತ್ತಿ ಕ್ಷೇತ್ರದಲ್ಲಿ ಬದಲಾವಣೆಗಳನ್ನು ತರಲಿದ್ದಾರೆ. ಕೆಲವು ರಾಶಿಗಳಿಗೆ ಹೊಸ ಅವಕಾಶ, ಬಡ್ತಿ, ಆದಾಯ ವೃದ್ಧಿಯಾದರೆ, ಇನ್ನು ಕೆಲವರಿಗೆ ಮಾತುಕತೆಯಲ್ಲಿ ಎಚ್ಚರಿಕೆ, ತಾಳ್ಮೆ ಅಗತ್ಯ. ನಿಮ್ಮ ರಾಶಿಫಲ ತಿಳಿದು ಉತ್ತಮ ನಿರ್ಧಾರಗಳನ್ನು ಕೈಗೊಳ್ಳಿ. ನವೆಂಬರ್ ೧೫ರಿಂದ ೨೧ರವರೆಗೆ ದಶಮ ಸ್ಥಾನದ ಮೇಲೆ ಗ್ರಹಗಳ ನೆರಳು ಬೆಳಕು ಜೊತೆಯಾಗಿ ಬೀಳುತ್ತವೆ. ಬುಧ ಮತ್ತು ಶುಕ್ರ ಋಜುವಾಗಿ ಅರ್ಧಕ್ಕೆ ನಿಂತ ಕೆಲಸಗಳು ಮತ್ತೆ ಆರಂಭ. ಸಿಂಹದ ಕುಜ ಶ್ರಮಕ್ಕೆ ಶಕ್ತಿ ತುಂಬಿದರೆ, ಕರ್ಕಾಟಕದ ಗುರು ದಿಕ್ಕು ತೋರಿಸುವನು.