ಕಾರವಾರ: ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪರೀಕ್ಷೆಯು ನವೆಂಬರ್ 15 ರಂದು ಕಾರವಾರದ ನಾಲ್ಕು ಕೇಂದ್ರಗಳಲ್ಲಿ ನಡೆಯಲಿದ್ದು, ಪಾರದರ್ಶಕತೆಗೆ ಎಲ್ಲ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾ. ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜ್ನಲ್ಲಿ 20 ಕೊಠಡಿಗಳಿದ್ದು, 528 ಅಭ್ಯರ್ಥಿಗಳಿದ್ದಾರೆ. ಒಟ್ಟಾರೆ 81 ಕೊಠಡಿಗಳಲ್ಲಿ 1970 ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿದ್ದಾರೆ ಎಂದರು.ಪರೀಕ್ಷೆ ಮೊದಲಿಗಿಂತ ಹೆಚ್ಚು ಭದ್ರತೆಯೊಂದಿಗೆ ನಡೆಯಲು ಪ್ರತಿ ಕೊಠಡಿಗೆ ಇಬ್ಬರಂತೆ ಒಟ್ಟು 172 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಪ್ರತಿ ಕೇಂದ್ರಕ್ಕೆ ಒಬ್ಬ ಇನ್ಸ್ಪೆಕ್ಟೆರ್ ಗ್ರೇಡ್ನ ಅಽಕಾರಿಯೊಬ್ಬರನ್ನು ಹಾಗೂ ಸಾಕಷ್ಟು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನೇಮಿಸಲಾಗಿದೆ.