ಕಾರವಾರ: ಖನಿಜ ನಿಕ್ಷೇಪಗಳನ್ನು ಹುಡುಕಲು ಅನುಕೂಲವಾಗುವಂತೆ ಭೂಭೌತಿಕ ನಕ್ಷೆ ತಯಾರಿಕೆಗಾಗಿ ಜಿಲ್ಲೆಯ ವಿವಿಧೆಡೆ ಕೆಳ ಹಂತಗಳಲ್ಲಿ ವಿಮಾನ ಹಾರಾಟ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.ಈ ಸಂಬಂಧ ಜಿಲ. ವಿಮಾನವು ಮಂಗಳೂರು, ಹುಬ್ಬಳ್ಳಿ ಏರ್ಪೋರ್ಟ್ಗಳಿಂದ ಕಾರ್ಯಾಚರಿಸುತ್ತಿದ್ದು, ಇನ್ನೂ ಕೆಲ ದಿನ ಜಿಲ್ಲೆಯ ಇತರ ಭಾಗಗಳಲ್ಲೂ ಸಮೀಕ್ಷೆ ನಡೆಸುವ ಸಾಧ್ಯತೆ ಇದೆ.ಶಿರಸಿ, ಯಲ್ಲಾಪುರ ತಾಲೂಕಿನ ಕೆಲವು ಭಾಗಗಳಲ್ಲಿ ಕೆಲ ದಿನಗಳಿಂದ ಅತ್ಯಂತ ಕೆಳ ಹಂತದಲ್ಲಿ ವಿಮಾನ ಹಾರಾಟ ನಡೆಯುತ್ತಿದೆ. ಬೇಡ್ತಿ-ಹಿರೇವಡ್ಡತ್ತಿ ನದಿ ಜೋಡಣೆಯ ಸಮೀಕ್ಷೆಯನ್ನು ವಿಮಾನ ನಡೆಸಿದೆಯೇ ಎಂದು ಇಲ್ಲಿನ ಜನ ಆತಂಕದಲ್ಲಿದ್ದಾರೆ. ಇಡೀ ದೇಶದಲ್ಲಿ ನಡೆಯುತ್ತಿರುವ ಸರ್ವೇಕ್ಷಣೆಯಾಗಿದೆ ಎಂದು ಪತ್ರ ಸ್ಪಷ್ಟಪಡಿಸಿದೆ.