ಕಾರವಾರ: ಪಾದವಿಕೃತಿ ಅಥವಾ ಕ್ಲಬ್ ಫುಟ್ ಚಿಕಿತ್ಸಾಲಯವನ್ನು ಇಲ್ಲಿನ ಕ್ರಿಮ್ಸ್ನಲ್ಲಿ ಶುಕ್ರವಾರ ಉದ್ಘಾಟಿಸಲಾಗಿದೆ.ರಾಷ್ಟ್ರೀಯ ಆರೋಗ್ಯ ಅಭಿಯಾನದ ಸಹಯೋಗದಲ್ಲಿ ಸರ್ವ್ ಟುಗೆದರ್ ಫೌಂಡೇಶನ್ ಎಂಬ ಸಂ. ಸರ್ವ್ ಟುಗೆದರ್ ಸಂಸ್ಥೆಯು ಪೋನ್ಸೆಟ್ ಎಂಬ ವಿಧಾನದ ಮೂಲಕ ಪಾದಗಳನ್ನು ಮೃದುಗೊಳಿಸಿ, ಅದಕ್ಕೆ ಪ್ಲಾಸ್ಟರ್ ಹಾಕುವ ಮೂಲಕ ಪಾದಗಳನ್ನು ಸಾಮಾನ್ಯ ಸ್ಥಿತಿಗೆ ತಂದು ನಡೆದಾಡಲು ಅನುಕೂಲವಾಗುವಂತೆ ಮಾಡಲಿದೆ. ಹುಟ್ಟಿನಿಂದ 2 ವರ್ಷದೊಳಗಿನ ಮಕ್ಕಳಿಗೆ ಈ ಚಿಕಿತ್ಸೆ ಸುಲಭವಾಗಿದೆ. 5 ವರ್ಷದವರೆಗಿನ ಮಕ್ಕಳಿಗೆ ಸಣ್ಣ ಶಸ್ತ್ರ ಚಿಕಿತ್ಸೆ ಮೂಲಕ ಸಮಸ್ಯೆ ಬಗೆಹರಿಸಲು ಯತ್ನಿಸಲಾಗುವುದು.