ಮಧ್ಯಮ ವರ್ಗದ ಜನರು ಸಣ್ಣ ಆಸೆ ಪುಟ್ಟ ಆಸೆಗಳನ್ನು ಈಡೇರಿಸಿಕೊಳ್ಳಲು ಕಾಯಬೇಕಾಗುತ್ತದೆ. ಆದರೆ ಪಶ್ಚಿಮ ಬಂಗಾಳದ ಸಿಲಿಗುರಿಯ ಡೆಲಿವರಿ ಬಾಯ್ ತನ್ನ ತಾಯಿಯ ಆಸೆಯನ್ನು ಈಡೇರಿಸಿದ್ದಾರೆ. ತನ್ನ ಮೂರು ತಿಂಗಳ ಸಂಬಳದ ಹಣ ಉಳಿಸಿ ತನ್ನ ತಾಯಿಗೆ ಟಿವಿ ಉಡುಗೊರೆಯಾಗಿ ನೀಡಿದ್ದಾನೆ. ಟಿವಿ ನೋಡುತ್ತಿದ್ದಂತೆ ತಾಯಿ ನೀಡಿದ ಪ್ರತಿಕ್ರಿಯೆ ನೆಟ್ಟಿಗರ ಗಮನ ಸೆಳೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ. ಪ್ರತಿಯೊಬ್ಬ ಮಗನಿಗೂ ತನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬು ಇರುತ್ತದೆ. ಇದೀಗ ಪಶ್ಚಿಮ ಬಂಗಾಳದ ಸಿಲಿಗುರಿಯ ಡೆಲಿವರಿ ಬಾಯ್ (delivery boy) ಆಗಿ ಕೆಲಸ ಮಾಡುವ ಯುವಕನೊಬ್ಬ ತನ್ನ ದುಡಿಮೆಯ ಹಣದಲ್ಲಿ ಸ್ಮಾರ್ಟ್ ಟಿವಿ ತಂದುಕೊಟ್ಟು ತಾಯಿಯನ್ನು ಖುಷಿ ಪಡಿಸಿದ್ದಾನೆ.