ಉದ್ಯೋಗಕ್ಕೆಂದು ವಿದೇಶಕ್ಕೆ ತೆರಳಿದಾಗ ಅನೇಕರು ಸ್ವಲ್ಪ ವರ್ಷಗಳ ಬಳಿಕ ಹುಟ್ಟೂರಿಗೆ ಮರಳುವುದು ಸಹಜ. ಆದರೆ ಇದೀಗ ಅಮೆರಿಕದಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಾಸಿಸುತ್ತಿದ್ದ ಕುಟುಂಬವೊಂದು ಭಾರತಕ್ಕೆ ಮರಳಲು ಮುಂದಾಗಿದೆ. ಮಹಿಳೆಯೊಬ್ಬರು ತಮ್ಮ ಈ ನಿರ್ಧಾರದ ಹಿಂದಿನ ಕಾರಣವನ್ನು ಬಹಿರಂಗ ಪಡಿಸಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ. ವಿದೇಶಕ್ಕೆ (foreign) ತೆರಳಿದ್ರೆ ಲೈಫ್ ಸೆಟ್ಲ್ ಆಯ್ತು ಎಂದು ಭಾವಿಸುತ್ತಾರೆ. ದಿನಗಳು ವರ್ಷಗಳು ಉರುಳಿದ್ದಂತೆ ನಮ್ಮ ಊರೇ ಬೆಸ್ಟ್ ಎಂದು ಕೊಳ್ತಾರೆ. ಆದರೆ ಕೆಲವೊಮ್ಮೆ ಈ ವಿದೇಶಿ ಜೀವನಕ್ಕೆ ಗುಡ್ ಬೈ ಹೇಳುತ್ತಾರೆ. ಹೌದು, ಅಮೆರಿಕದಲ್ಲಿ ನಾಲ್ಕು ವರ್ಷಗಳ ಕಾಲ ಕಳೆದ ನಂತರ, ಸ್ವೀಟಿ ರಂಜನ್ ತನ್ನ ಕುಟುಂಬದೊಂದಿಗೆ ಶಾಶ್ವತವಾಗಿ ಭಾರತಕ್ಕೆ ಮರಳುತ್ತಿದ್ದಾರೆ.