ಕೊಡಗಿನ ಸೋಮವಾರಪೇಟೆ ತಾಲ್ಲೂಕಿನ ಜಂಬೂರು ಗ್ರಾಮದಲ್ಲಿ ಒಂದು ಅಮಾನವೀಯ ಘಟನೆ ನಡೆದಿದೆ.ಸೂಟ್ಕೇಸ್ನಲ್ಲಿ 8 ತಿಂಗಳ ಹಸುಗೂಸನ್ನು ಬಿಟ್ಟು ತಾಯಿ ಪರಾರಿಯಾಗಿದ್ದರು. ಮಗುವಿನ ಅಳು ಕೇಳಿ ಸ್ಥಳೀಯರು, ಮಗುವನ್ನು ರಕ್ಷಿಸಿದ್ದಾರೆ. ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುವ ಮಗು ಸುರಕ್ಷಿತವಾಗಿದೆ. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಡಗು, ನವೆಂಬರ್, 13: ಎಂಟು ತಿಂಗಳ ಹಸುಗೂಸಿಗೆ ಅಮ್ಮನನ್ನ ಬಿಟ್ಟರೆ ಬೇರೆ ಪ್ರಪಂಚವಿಲ್ಲ. ಅಷ್ಟು ಪುಟ್ಟ ಮಗುವನ್ನ ಒಂದು ಕ್ಷಣ ಬಿಟ್ಟು ಹೋಗಲೂ ಯಾವುದೇ ತಾಯಿ ಕೂಡ ಹಿಂಜರಿಯುತ್ತಾರೆ, ಅಳಕುತ್ತಾಳೆ. ಆದರೆ ಇಲ್ಲೊಬ್ಬಳು ಮಹಾತಾಯಿ ಎಂಟು ತಿಂಗಳ ಮಗುವನ್ನ ಸೂಟ್ಕೇಸ್ ಒಳಗೆ ಹಾಕಿ ಪಾರಾರಿಯಾಗಿದ್ದಾಳೆ. ಸ್ವಲ್ಪ ತಡವಾಗಿದ್ದರೂ ಮಗು ಸಾವನ್ನಪ್ಪುತ್ತಿತ್ತು, ಆದರೆ ಸ್ಥಳೀಯರಿಂದ ರಕ್ಷಣೆ ಮಾಡಲಾಗಿದೆ.