ಸಣ್ಣ ಬಜೆಟ್ ಸಿನಿಮಾ ‘ಹನುಮಾನ್ ಅಂಶ್’, ‘ಟಾಕ್ಸಿಕ್’ ಸೇರಿದಂತೆ ಇನ್ನೂ ಕೆಲ ದೊಡ್ಡ ಸಿನಿಮಾಗಳ ಮುಂದೆ ಸೆಣಸಾಡಿ ಬಾಕ್ಸ್ ಆಫೀಸ್ನಲ್ಲಿ ದಾಖಲೆಯ ಗಳಿಕೆ ಮಾಡಿ ಇತಿಹಾಸ ಸೇರಿದೆ. ಇದೀಗ ಮತ್ತೆ ಅಂಥಹದ್ದೇ ಒಂದು ಸಣ್ಣ ಬಜೆಟ್ ಸಿನಿಮಾ ‘ರಾಮಾಯಣ’ದಂಥಹಾ ದೊಡ್ಡ ಸಿನಿಮಾದ ಎದುರು ಮಿಂಚುತ್ತಿದೆ. ಅದುವೇ ‘ಪೈರ್’ (ಚಿತಾ). ಸಣ್ಣ ಬಜೆಟ್ನ ಯಾವ ದೊಡ್ಡ ಸ್ಟಾರ್ ನಟ-ನಟಿಯರೂ ಇಲ್ಲದ ಕೇವಲ ಕತೆಯನ್ನೇ ನೆಚ್ಚಿಕೊಂಡಿರುವ ಈ ಸಿನಿಮಾ ‘ರಾಮಾಯಣ’ದ ಎದುರು ತೊಡೆತಟ್ಟಿದೆ.