ಹೆಣ್ಣು ಮಕ್ಕಳಿಗೆ ಅಪ್ಪನೇ ಪ್ರಪಂಚ. ಅಪ್ಪ ಮಗಳ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಇದೀಗ ಮಗಳೊಬ್ಬಳು ತನ್ನ ತಂದೆಗೆ ಕೊಟ್ಟ ಗಿಫ್ಟ್ ನೆಟ್ಟಿಗರ ಗಮನ ಸೆಳೆದಿದೆ. ಮಗಳು ತನ್ನ ತಂದೆಗೆ ಕಾರನ್ನು ಉಡುಗೊರೆಯಾಗಿ ನೀಡಿದ್ದು, ಆತನನ್ನು ಭಾವುಕವನ್ನಾಗಿಸಿದೆ. ಈ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ. ಅಪ್ಪ (father) ಅಂದ್ರೆ ಹೆಣ್ಣು ಮಕ್ಕಳಿಗೆ ಪ್ರಾಣಕ್ಕಿಂತ ಹೆಚ್ಚು. ಇತ್ತ ತಂದೆಯು ತಮ್ಮ ಮಗಳ ಖುಷಿಗಾಗಿ ಏನು ಬೇಕಾದ್ರೂ ಮಾಡಲು ಸಿದ್ಧವಿರುತ್ತಾನೆ. ಟಾಂಜಾನಿಯಾದ ಯುವತಿ ತನ್ನ ತಂದೆಗೆ ಮೊದಲ ಕಾರು ಕೊಡಿಸಿದ್ದಾಳೆ. ಮಗಳ ಸರ್ಪ್ರೈಸ್ ಗಿಫ್ಟ್ ಗೆ ತಂದೆ ಭಾವುಕರಾಗಿದ್ದಾರೆ.