ಮೈಸೂರಿನಲ್ಲಿ ವಿಶ್ವದ ಮೊದಲ ಟಿಲ್ಟೆಡ್ ಎಲ್ಇಡಿ ಡೋಮ್ ತಾರಾಲಯ 'ಕಾಸ್ಮೋಸ್' ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದು, ಈ ಅತ್ಯಾಧುನಿಕ ತಾರಾಲಯದ ಮೂಲಕ ಮೈಸೂರು ಭಾರತದ ವೈಜ್ಞಾನಿಕ ಪಯಣಕ್ಕೆ ಹೊಸ ಅಧ್ಯಾಯ ಸೇರಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿ ವಿಜ್ಞಾನ ಆಧ್ಯಾತ್ಮ ಜೊತೆ ಜೊತೆಗೆ ಸಾಗಿದೆ. ನಮ್ಮ ಪೂರ್ವಿಕರು ನಕ್ಷತ್ರ, ಗ್ರಹದ ಗತಿಯನ್ನು ಗುರುತಿಸಿದ್ದರು. ಅವರೇ ಕ್ಯಾಲೆಂಡರ್ ರಚಿಸಿದ್ದರು. ಮೈಸೂರು ಇಂತಹುದ್ದಕ್ಕೆಲ್ಲ ಉತ್ತಮ ಪ್ರೋತ್ಸಾಹ ನೀಡಿದೆ ಎಂದ ಪ್ರಧಾನಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಉಲ್ಲೇಖಿಸಿ ರಾಜಮನೆತನದ ಕೊಡುಗೆ ಸ್ಮರಿಸಿದ್ದಾರೆ.