57ನೇ IFFI ಚಿತ್ರೋತ್ಸವದಲ್ಲಿ ಬ್ರಿಕ್ಸ್ ಸಿನಿಮಾಗಳಿಗೆ ವಿಶೇಷ ಒತ್ತು ನೀಡಲಾಗಿದೆ. ಭಾರತದ ‘ರಾಮಾಯಣ: ಪಾರ್ಟ್ 1’ ಚಿತ್ರದೊಂದಿಗೆ ಆರಂಭವಾಗಲಿರುವ ಈ ವಿಭಾಗದಲ್ಲಿ ಬ್ರಿಕ್ಸ್ ಒಕ್ಕೂಟದ ಎಲ್ಲಾ 11 ಸದಸ್ಯ ರಾಷ್ಟ್ರಗಳ ಹಾಗೂ ಪಾಲುದಾರ ರಾಷ್ಟ್ರಗಳ ವೈವಿಧ್ಯಮಯ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಆ ಕುರಿತು ಮಾಹಿತಿ ಹಂಚಿಕೊಳ್ಳಲಾಗಿದೆ. 57ನೇ ಆವೃತ್ತಿಯ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರಮುಖ ವಿಭಾಗಗಳಾದ ‘ಇಂಡಿಯನ್ ಪನೋರಮಾ’ ಮತ್ತು ‘ಬ್ರಿಕ್ಸ್’ ವಿಭಾಗಗಳ ಉದ್ಘಾಟನಾ ಚಿತ್ರಗಳು ಘೋಷಣೆಯಾಗಿವೆ. ಇಂಡಿಯನ್ ಪನೋರಮಾ ವಿಭಾಗವು ಬಾಲಿವುಡ್ನ ಜನಪ್ರಿಯ ಸಿನಿಮಾ ‘ಧುರಂಧರ್’ ಪ್ರದರ್ಶನದೊಂದಿಗೆ ಆರಂಭವಾದರೆ, ಬ್ರಿಕ್ಸ್ ದೇಶಗಳ ಸಿನಿಮಾಗಳ ವಿಶೇಷ ವಿಭಾಗವು ಇತ್ತೀಚೆಗೆ ಬಿಡುಗಡೆಯಾದ ‘ರಾಮಾಯಣ’ ಚಿತ್ರದೊಂದಿಗೆ ಉದ್ಘಾಟನೆಯಾಗಲಿದೆ.