ಭಾರತೀಯ ಆಹಾರ ಸುರಕ್ಷತೆ ಮತ್ತು ಪ್ರಮಾಣೀಕರಣ ಪ್ರಾಧಿಕಾರವು (FSSAI) ಹಾಲು ಮತ್ತು ಡೈರಿ ಉತ್ಪನ್ನಗಳ ಪ್ಯಾಕೆಟ್ಗಳ ಮೇಲೆ ಹೊಸ ನೀಲಿ ಮತ್ತು ಬಿಳಿ ಬಣ್ಣದ ಏಕರೂಪದ ಲೋಗೋವನ್ನು ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಿದೆ. 2028ರ ಜುಲೈ 1ರಿಂದ ಈ ನಿಯಮ ಜಾರಿಗೆ ಬರಲಿದೆ. ಹಾಲು, ಮೊಸರು, ಪನ್ನೀರ್ ಇತ್ಯಾದಿ ಡೈರಿ ಉತ್ಪನ್ನಗಳ ಪ್ಯಾಕ್ಗಳಲ್ಲಿ ಹೊಸ ಲೋಗೋವನ್ನು ಕಾಣಬಹುದು. ನವದೆಹಲಿ, ನವೆಂಬರ್ 13: ಗ್ರಾಹಕರು ಹಾಲು ಮತ್ತು ಡೈರಿ ಉತ್ಪನ್ನಗಳನ್ನು ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ ಎಫ್ಎಸ್ಎಸ್ಎಐ (FSSAI) ಹೊಸ ಏಕರೂಪದ ಗುರುತಿನ ಲೋಗೋವನ್ನು ಪರಿಚಯಿಸಿದೆ.