ಶಿಮ್ಲಾ ಡಿಸಿ ಕಚೇರಿ ಆವರಣದಲ್ಲಿ ಮಂಗನೊಂದು ಭಾರಿ ಹೈಡ್ರಾಮಾ ಸೃಷ್ಟಿಸಿದೆ. ಬ್ಯಾಂಕ್ಗೆ ಜಮಾ ಮಾಡಲು ವ್ಯಕ್ತಿಯೊಬ್ಬರು ತಂದಿದ್ದ ₹81,800 ನಗದನ್ನು ಕಸಿದುಕೊಂಡ ಕಪಿ ಮರವೇರಿ ನೋಟುಗಳ ಮಳೆ ಸುರಿಸಿತು. ಜನರು ಹಣ ಹೆಕ್ಕಲು ಮುಗಿಬಿದ್ದರು. ಬಹುತೇಕ ಹಣ ವಾಪಸ್ ಸಿಕ್ಕರೂ, ₹1,500 ನಷ್ಟವಾಗಿದೆ ಮತ್ತು ಕೆಲವು ನೋಟುಗಳು ಹರಿದಿವೆ. ಶಿಮ್ಲಾದಲ್ಲಿ ಮಂಗಗಳ ಹಾವಳಿ ಹೆಚ್ಚಾಗುತ್ತಿದ್ದು, ನಾಗರಿಕರಲ್ಲಿ ಆತಂಕ ಮೂಡಿಸಿದೆ. ಶಿಮ್ಲಾ, ನ.13: ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮಂಗವೊಂದು ಭಾರಿ ಹೈಡ್ರಾಮಾ ಸೃಷ್ಟಿಸಿದೆ. ಬ್ಯಾಂಕ್ಗೆ ಜಮಾ ಮಾಡಲು ವ್ಯಕ್ತಿಯೊಬ್ಬರು ತಂದಿದ್ದ 81,800 ರೂ. ನಗದು ಕಂತೆಯನ್ನು ಕಸಿದುಕೊಂಡ ಕಪಿ, ಸಮೀಪದ ಮರವನ್ನೇರಿ ಮೇಲಿನಿಂದ ನೋಟುಗಳ ಮಳೆ ಸುರಿಸಿದೆ.