ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆ ನಡುವೆಯೇ ಅನುದಾನ ಹಂಚಿಕೆ ವಿಚಾರವಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆರೋಪಗಳಿಗೆ ಸಚಿವ ಕೃಷ್ಣ ಭೈರೇಗೌಡ ತಿರುಗೇಟು ನೀಡಿದ್ದಾರೆ. ಮೆಟ್ರೋ ಯೋಜನೆಗೆ ರಾಜ್ಯ ಸರ್ಕಾರ ಶೇ. 84ರಷ್ಟು ವೆಚ್ಚ ಭರಿಸುತ್ತಿದ್ದು, ರಾಜ್ಯ ಸರ್ಕಾರ ಇತ್ತೀಚಿಗೆ ಕೂಡ ಸಾವಿರದ ನಲವತ್ತಾರು ಕೋಟಿ ಕೊಟ್ಟಿದೆ. ಮೆಟ್ರೋಗೆ ಸ್ವಂತ ಆದಾಯದಿಂದ ಸಾಲ ತೀರಿಸುವ ಶಕ್ತಿ ಇಲ್ಲ ಎಂದವರು ಹೇಳಿದ್ದಾರೆ. ಬೆಂಗಳೂರು, ನವೆಂಬರ್ 13: ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆ ಸಂಭ್ರಮದ ನಡುವೆ ಮೆಟ್ರೋಗೆ ಅನುದಾನ ವಿಚಾರವಾಗಿ ಕಾಂಗ್ರೆಸ್-ಬಿಜೆಪಿ ನಡುವೆ ಮಾತಿನ ಸಮರ ಜೋರಾಗಿದೆ.