ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಮಹತ್ವದ ಬದಲಾವಣೆ ಪ್ರಸ್ತಾವನೆ. 112 ಚಿಕಿತ್ಸಾ ಪ್ಯಾಕೇಜ್ಗಳು ಸರ್ಕಾರಿ ಆಸ್ಪತ್ರೆಗಳಿಗೆ ಮಾತ್ರ ಸೀಮಿತಗೊಳ್ಳುವ ಸಾಧ್ಯತೆ. ಇದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಈ ನಿರ್ದಿಷ್ಟ ಚಿಕಿತ್ಸೆಗಳು ಲಭ್ಯವಿಲ್ಲದೆ ಹೋಗಬಹುದು. ರಾಜ್ಯ ಸರ್ಕಾರಗಳು ಈ ನಿರ್ಧಾರ ಕೈಗೊಳ್ಳಲಿವೆ. ರೋಗಿಗಳು ಚಿಕಿತ್ಸೆಗೂ ಮುನ್ನ ಆಸ್ಪತ್ರೆಯಲ್ಲಿ ಲಭ್ಯತೆ ಬಗ್ಗೆ ಪರಿಶೀಲಿಸುವುದು ಉತ್ತಮ. ನವದೆಹಲಿ, ನವೆಂಬರ್ 13: ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ (PM-JAY) ಅಡಿಯಲ್ಲಿ ಮಹತ್ವದ ಬದಲಾವಣೆಗೆ ಸಿದ್ಧತೆ ನಡೆದಿದೆ. ಹೊಸ ಪ್ರಸ್ತಾವನೆಯ ಪ್ರಕಾರ, 112 ಚಿಕಿತ್ಸಾ ಪ್ಯಾಕೇಜ್ಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಮಾತ್ರ ಸೀಮಿತಗೊಳಿಸುವ ಸಾಧ್ಯತೆಯಿದೆ.