ಒಂದು ವರ್ಷದ ಹಿಂದಷ್ಟೆ ಒಂದೇ ಒಂದು ಗೆಲುವಿಗಾಗಿ ಹಾತೊರೆಯುತ್ತಿದ್ದ, ಕೈತಪ್ಪಿ ಹೋದ ಸಿನಿಮಾಗಳ ಬಗ್ಗೆ ಬಹಿರಂಗವಾಗಿ ಬೇಸರ ಹೊರಹಾಕಿದ್ದ ಸೂರ್ಯ ಈಗ ಬ್ಲಾಕ್ ಬಸ್ಟರ್ ನಟ ಎನಿಸಿಕೊಂಡಿದ್ದಾರೆ. ಇದರ ಜೊತೆಗೆ ಸೂರ್ಯ, ಬಾಲಿವುಡ್ನ ಸೂಪರ್ ಸ್ಟಾರ್ಗಳಾದ ಶಾರುಖ್ ಖಾನ್, ಅಕ್ಷಯ್ ಕುಮಾರ್ ಅವರುಗಳ ಸಾಲಿಗೆ ಸೇರಿಕೊಂಡಿದ್ದಾರೆ. ತಮಿಳು ನಟ ಸೂರ್ಯ, ತಮ್ಮ ವೃತ್ತಿ ಜೀವನದ ಅತ್ಯುತ್ತಮ ಫೇಸ್ನಲ್ಲಿದ್ದಾರೆ. ಅವರ ನಟನೆಯ ಮೂರು ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಬ್ಲಾಕ್ ಬಸ್ಟರ್ ಆಗಿವೆ. ಪ್ರಸ್ತುತ ಸ್ಟಾರ್ ನಟರುಗಳು ವರ್ಷಕ್ಕೆ ಒಂದು ಸಿನಿಮಾ ಸಹ ನೀಡಲು ಹೆಣಗಾಡುತ್ತಿದ್ದಾರೆ. ಹಾಗೆ ಹೆಣಗಾಡಿ ಬಿಡುಗಡೆ ಮಾಡುವ ಸಿನಿಮಾ ಸಹ ಹಿಟ್ ಆಗುವುದು ಅನುಮಾನ.