ತಂತ್ರಜ್ಞಾನದ ಆತಂಕ ಹಾಗೂ ಸೈಬರ್ ಜಗತ್ತಿನ ಕಥಾಹಂದರ ಹೊಂದಿರುವ ‘ಲಂಬೋದರ 2.0’ ಸಿನಿಮಾ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. ನಿರ್ದೇಶಕ ಸುನಿ ತಮ್ಮ ವಿಶಿಷ್ಟ ಶೈಲಿಯಲ್ಲಿ ಎಐ ಮತ್ತು ಹ್ಯಾಕಿಂಗ್ ಕಥೆಯನ್ನು ತೆರೆಮೇಲೆ ತಂದಿದ್ದು, ಕೆಲವೊಂದು ಕೊರತೆಗಳ ನಡುವೆಯೂ ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ನೋಡಲು ಖುಷಿಕೊಡುತ್ತದೆ. ಇಂದಿನ ಕಾಲದಲ್ಲಿ ಜಗತ್ತು ಯಾವ ವೇಗದಲ್ಲಿ ಸಾಗುತ್ತಿದೆ ಎಂಬುದುನ್ನು ಮತ್ತೆ ಬಿಡಿಸಿ ಹೇಳಬೇಕಿಲ್ಲ. ಒಂದುಕಡೆ ತಂತ್ರಜ್ಞಾನದಲ್ಲಿ ಮುಂದೆ ಹೋಗುತ್ತಿದ್ದೇವೆ ಎಂಬ ಖುಷಿಯಾದರೆ, ಮತ್ತೊಂದು ಕಡೆ ಇದೇ ತಂತ್ರಜ್ಞಾನ ಎಲ್ಲರನ್ನೂ ನುಂಗಿ ಬಿಡಬಹುದು ಎಂಬ ಆತಂಕ. ಇದೇ ಆತಂಕವನ್ನು ಇಟ್ಟುಕೊಂಡು ‘ಲಂಬೋದರ 2.O’ ಸಿನಿಮಾ ಸಿದ್ಧವಾಗಿದೆ. ಈ ಸಿನಿಮಾ ಹೇಗಿದೆ ಎಂಬುದರ ವಿಮರ್ಶೆ ಇಲ್ಲಿದೆ.