ಯಮುನಾ ನದಿಯಲ್ಲಿ ಸತ್ತ ಮೀನುಗಳು ತೇಲುತ್ತಿರುವ ವಿಡಿಯೋ ವೈರಲ್.ಮತ್ತೆ ಸರ್ಕಾರ ಹಾಗೂ ಎಎಪಿ ನಾಯಕರ ಮಧ್ಯೆ ರಾಜಕೀಯ ವಾಕ್ಸಮರ.ಎಎಪಿ ಕಾರ್ಯಕರ್ತರು ನದಿಗೆ ಸತ್ತ ಮೀನು ಹಾಕಿಲ್ಲ ಎಂದು ಎಎಪಿ ಸ್ಪಷ್ಟ. ತೇಲುತ್ತಿರುವ ಸತ್ತ ಮೀನುಗಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ರಾಜಕೀಯ ಹಗ್ಗ-ಜಗ್ಗಾಟಕ್ಕೆ ಕಾರಣವಾಗಿದೆ. ಬಿಜೆಪಿ ಮತ್ತು ವಿರೋಧ ಪಕ್ಷ ಆಮ್ ಆದ್ಮಿ ಪಕ್ಷದ ನಡುವೆ ಟ್ವೀಟ್ ವಾರ್ ನಡೆಯುತ್ತಿದೆ.ಯಮುನಾ ನದಿಯಲ್ಲಿ ಕೆಲವು ದಿನಗಳ ಹಿಂದೆ 'ನಮೋ ಯಮುನಾ ರಿವರ್ ಸಫಾರಿ' ಎನ್ನುವ ಕ್ರೂಸ್ ಸೇವೆ ಆರಂಭವಾಗಿತ್ತು. ಇದು ಅಧಿಕೃತವಾಗಿ ಉದ್ಘಾಟನೆಗೊಂಡ ಕೆಲವೇ ದಿನಗಳಲ್ಲಿ ಮೀನುಗಳು ಸಾವನ್ನಪ್ಪಿವೆ. ಈ ತಿಂಗಳಲ್ಲಿ ಸಾವಿರಾರು ಮೀನುಗಳು ಮೃತಪಟ್ಟಿರುವ 2ನೇ ಘಟನೆ ಇದಾಗಿದೆ..