ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡ ವಿಚಾರ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ, ಕಾಂಗ್ರೆಸ್ ನಾಯಕ ಹಾಗೂ. ಪ್ರಧಾನಿ ಮೋದಿ ಅವರನ್ನು ತಾವು ಬಹಳ ಹಿಂದಿನಿಂದಲೂ ಬಲ್ಲವರಾಗಿದ್ದು, ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ವೈಯಕ್ತಿಕವಾಗಿ ಗೌರವಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.ನರೇಂದ್ರ ಭಾಯಿ ಪ್ರಧಾನಿಯಾಗುವ ಮೊದಲಿನಿಂದಲೂ ನನಗೆ ಪರಿಚಯ. ನಾವಿಬ್ಬರೂ ಗುಜರಾತಿಗಳು ಎಂಬ ಕಾರಣಕ್ಕೆ ವಿಶೇಷ ಬಾಂಧವ್ಯವಿದೆ. ನಮ್ಮ ನಡುವಿನ ಭಿನ್ನಾಭಿಪ್ರಾಯಗಳು ರಾಜಕೀಯಕ್ಕೆ ಸಂಬಂಧಿಸಿದವೇ ಹೊರತು ವೈಯಕ್ತಿಕ ವಿಚಾರಗಳಲ್ಲ ಎಂದು ಹೇಳಿದ್ದಾರೆ.. ಬಿಜೆಪಿ ಹಲವು ವರ್ಷಗಳಿಂದ ಸ್ಯಾಮ್ ಪಿತ್ರೋಡಾ ಅವರನ್ನು ಟೀಕಿಸುತ್ತಾ ಬಂದಿದೆ.