ಶಕ್ತಿ ಯೋಜನೆಯ ಫಲಾನುಭವಿಗಳಿಗೆ ಕಾರ್ಡ್ ನೀಡುವ ಪ್ರಸ್ತಾವ ಮೊದಲಿನಿಂದಲೂ ಇದೆ ಆ ಫಲಾನುಭವಿಗಳ ಜತೆಗೆ ಪುರುಷ ಪ್ರಯಾಣಿಕರಿಗೂ ಕಾರ್ಡ್ ನೀಡಲು ಸರ್ಕಾರ ನಿರ್ಧಾರ ಸ್ತ್ರೀಯರಿಗೆ ಉಚಿತ ಪ್ರಯಾಣ ಇರುತ್ತದೆ. ಇತರರು ಸ್ಮಾರ್ಟ್ ಕಾರ್ಡಿಗೆ ರೀಚಾರ್ಜ್ ಮಾಡಿಸಬೇಕು ಪ್ರಯಾಣ ವೇಳೆ ಇಟಿಎಂಗೆ ಕಾರ್ಡ್ ತೋರಿಸಬೇಕು. ಒಂದೇ ಕಾರ್ಡ್ 4 ನಿಗಮಗಳಲ್ಲೂ ಬಳಸಬಹುದು -- ಬೆಂಗಳೂರು (ಅ.10): ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಪ್ರಯಾಣ ದರ ಪಾವತಿ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗುತ್ತಿದ್ದು, ಬೆಂಗಳೂರಿನ ‘ನಮ್ಮ ಮೆಟ್ರೋ’ ಮಾದರಿಯಲ್ಲಿ ಸ್ಮಾರ್ಟ್ಕಾರ್ಡ್ ಮೂಲಕ ಬಸ್ ಪ್ರಯಾಣ ದರ ಪಾವತಿ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ‘ಶಕ್ತಿ’ ಯೋಜನೆ ಫಲಾನುಭವಿಗಳಿಗೆ ಸ್ಮಾರ್ಟ್ಕಾರ್ಡ್ ನೀಡಲು ಈಗಾಗಲೇ ಯೋಜಿಸಲಾಗಿದೆ.