ಬೆಂಗಳೂರು : ಬೆಣಗಳೂರು ನಮ್ಮ ಮೆಟ್ರೋ ರೈಲಿನ ಹೊಸ ಮಾರ್ಗ ಪಿಂಕ್ ಲೈನ್ ಉದ್ಘಾಟನೆಗೆ ಆಗಮಿಸಲು ಪ್ರಧಾನಿ ನರೇಂದ್ರ ಮೋದಿ ಒಪ್ಪಿಗೆ ಸೂಚಿಸಿದ್ದಾರೆ, ಈ ಬಗ್ಗೆ ಅಧಿಕೃತ ದಿನ ಇನ್ನೂ ನಿಗದಿಯಾಗಬೇಕಿದೆ. ಆದರೆ. ಎಲ್ಲಾ ಅಂದುಕೊಂಡಂತೆ ಆದರೆ, ನವೆಂಬರ್ 15ಕ್ಕೆ ಮೋದಿ ಚಾಲನೆ ನೀಡುವುದು ಬಹುತೇಕ ಖಚಿತ ಎನ್ನಲಾಗಿದೆ. ಈ ಸಂಬಂಧ ಪ್ರಧಾನ ಮಂತ್ರಿಗಳ ಸಚಿವಾಲಯದಿಂದ ಅಧಿಕೃತ ಸೂಚನೆ ಹೊರಬೀಳಬೇಕಾಗಿದ್ದು, ಸೂಚನೆಗಾಗಿ ಮೆಟ್ರೋ ಅಧಿಕಾರಿಗಳು ಕಾಯುತ್ತಿದ್ದಾರೆ. ಪ್ರಧಾನಿ ಸಚಿವಾಲಯದಿಂದ ಮಂಗಳವಾರ ಮೆಟ್ರೋ ಮುಖ್ಯಸ್ಥರಿಗೆ ಈ ಸಂಬಂಧ ದೂರವಾಣಿ ಮೂಲಕ ಪಿಂಕ್ ಲೈನ್ ಉದ್ಘಾಟನೆಗೆ ಎಲ್ಲಾ ಸಿದ್ಧವಿದೆಯೇ, ಪರಿಸ್ಥಿತಿ ಹೇಗೆ ಎಂಬುದನ್ನು ವಿಚಾರಿಸಲಾಗಿದೆ.