ಬೆಳಗಿನ ಸಮಯವು ಅತ್ಯಂತ ಪ್ರಮುಖ ಸಮಯವಾಗಿದ್ದು, ಇದು ಹೇಗೆ ಆರಂಭವಾಗಿತ್ತದೆ ಎಂಬುದರ ಮೇಲೆ ನಮ್ಮ ಇಡೀ ದಿನ ನಿರ್ಣಯವಾಗುತ್ತದೆ. ಅದಕ್ಕಾಗಿಯೇ ಯಾವಾಗಲೂ ಸಕಾರಾತ್ಮಕವಾಗಿ ದಿನವನ್ನು ಆರಂಭಿಸಬೇಕು ಅನ್ನೋದು. ಇದರ ಜೊತೆಗೆ ಬೆಳಗಿನ ದಿನಚರಿಯಲ್ಲಿ ಈ ಒಂದಷ್ಟು ಉತ್ತಮ ಕೆಲಸವನ್ನು ಮಾಡುವ ಮೂಲಕ ಆರೋಗ್ಯಕರ ಜೀವನವನ್ನು ಕೂಡ ನಡೆಸಬಹುದು. ಹಾಗಿದ್ರೆ ಉತ್ತಮ ಆರೋಗ್ಯಕ್ಕಾಗಿ ಬೆಳಗಿನ ದಿನಚರಿಯಲ್ಲಿ ಯಾವೆಲ್ಲಾ ಅಭ್ಯಾಸಗಳನ್ನು ಪಾಲಿಸಬೇಕು ಎಂಬುದನ್ನು ನೋಡೋಣ. ಇಂದಿನ ವೇಗದ ಜೀವನದಲ್ಲಿ, ಜನರು ದೀರ್ಘಕಾಲದವರೆಗೆ ಆರೋಗ್ಯವಾಗಿರಲು ಮತ್ತು ಫಿಟ್ ಆಗಿರಲು ಬಯಸುತ್ತಾರೆ. ಬೆಳಗಿನ ದಿನಚರಿಯಲ್ಲಿ (Morning Routine) ತಪ್ಪದೆ ಕೆಲವೊಂದು ಅಭ್ಯಾಸಗಳನ್ನು ಪಾಲಿಸುವ ಮೂಲಕ ಆರೋಗ್ಯಕರ ಜೀವನವನ್ನು ನಡೆಸಬಹುದು.